ಕೃಷಿ ಸಚಿವ ಚಲುವರಾಯಸ್ವಾಮಿಯವರು ಮೈಸೂರಿನಲ್ಲಿ ಎಂಗೇಜ್ಮೆಂಟ್ ನಲ್ಲಿ ಭೇಟಿಯಾಗಿದ್ದೆವು. ಆದರೆ ಅಲ್ಲಿ ಹಣಕಾಸಿನ ವಿಚಾರವಾಗಲಿ, ವರ್ಗಾವಣೆ ವಿಚಾರವಾಗಲಿ ಚರ್ಚೆ ಮಾಡಿಲ್ಲ ಎಂದು ಕೀಲಾರ ಜಯರಾಮ್ ಸ್ಪಷ್ಟ ಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, 40 ವರ್ಷಗಳಿಂದ ಸಚಿವರಾದ ಚಲುವರಾಯಸ್ವಾಮಿ ಜೊತೆ ಒಡನಾಡಿಯಾಗಿದ್ದೇನೆ. ಕುಮಾರಸ್ವಾಮಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ನೀಡುತಿದ್ದಾರೆ ಎಂದರು.
ಚಲುವರಾಯಸ್ವಾಮಿ ಅವರಿಂದ ನನಗೆ ಯಾವುದೇ ರೀತಿ ಅನ್ಯಾಯವಾಗಿಲ್ಲ, ವರ್ಗಾವಣೆ ಮಾಡಿಸಲು ನನ್ನ ಮಕ್ಕಳಾರು ಕೃಷಿ ಇಲಾಖೆ ಅಥವಾ ಬೇರೆ ಇಲಾಖೆಗಳಲ್ಲಿ ಹುದ್ದೆ ಹೊಂದಿಲ್ಲ. ಮತ್ತು ಯಾವುದೇ ಹಣಕಾಸಿನ ವ್ಯವಹಾರವೂ ಇಲ್ಲವೆಂದಿರುವ ಅವರು ರಾಜಕೀಯವಾಗಿ ಕುಮಾರಸ್ವಾಮಿ ಟಿಕೆಟ್ ನೀಡದೆ ನನಗೆ ಮೋಸ ಮೋಸಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು