ಕರ್ನಾಟಕ ಸಂಭ್ರಮ-50ರ ಸುವರ್ಣ ಮಹೋತ್ಸವ । ಪ್ರಶಸ್ತಿಗೆ ಭಾಜನರಾದ ಡಾ.ಮೀರಾ ಶಿವಲಿಂಗಯ್ಯ - ಸರ್ಕಾರಕ್ಕೆ ಅಭಿನಂದನೆ

ಕರ್ನಾಟಕ ಸಂಭ್ರಮ-50ರ ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಗಣ ನೀಯ ಸಾಧನೆ ಮಾಡಿರುವ 50 ಜನ ಪುರುಷ ಮತ್ತು 50 ಜನ ಮಹಿಳಾ ಸಾಧಕರಿಗೆ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ.

ಪ್ರತಿವರ್ಷ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಿಂತ ವಿಭಿನ್ನವಾದ ಪ್ರಶಸ್ತಿ ಇದಾಗಿದ್ದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರಿಗೆ ಸಂಕೀರ್ಣ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರಕಟಿಸಿರುವುದ್ದಕ್ಕೆ ಅವರು ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.


ಅವರು ಇಂದು ವಾಹಿನಿಯೊಂದಿಗೆ ಮಾತನಾಡಿ , ಕರ್ನಾಟಕ ಸರ್ಕಾರ ಸುವರ್ಣ ಮಹೋತ್ಸವ ಪ್ರಸಸ್ತಿ ನೀಡಿರುವುದು ಸಂತೋಷ ತಂದಿದೆ ಎಂದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರತಿ ವರ್ಷ ಬರುತ್ತದೆ ಆದರೆ ಸುವರ್ಣ ಮಹೋತ್ಸವ ಜೀವಮಾನದಲ್ಲಿ ಒಂದು ಬಾರಿ ಬರುತ್ತದೆ ಈ ಪ್ರಶಸ್ತಿ ಜೀವಮಾನದ ಅತ್ತುನ್ನತ ಪ್ರಶಸ್ತಿ ಎಂದು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. 1956ರ ನವೆಂಬರ್ 1 ರಂದು ಕನ್ನಡ ಪ್ರಾಂತ್ಯವಾಗಿ ಮೈಸೂರು ಹೆಸರು ನೀಡಿತ್ತು , ಮತ್ತೆ 1973ರ ನವೆಂಬರ್ 1 ರಂದು ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡ ಸಂದರ್ಭದಲ್ಲಿ ನಮ್ಮ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಮತ್ತೆ ಈಗ ಕರ್ನಾಟಕ ಸಂಭ್ರಮ-50ರ ಸುಸಂದರ್ಭದಲ್ಲಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಂದೊದಗಿರುವುದಕ್ಕೆ ಹರ್ಷವ್ಯಕ್ತಪಡಿಸಿದರು. ಈ ಪ್ರಶಸ್ತಿಯಿಂದ ಇನ್ನಷ್ಟು ಜವಾಬ್ಧಾರಿ ಹೆಚ್ಚಾಗಿದೆ ಎಂದರು.


ಇದೇ ರೀತಿ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮಂಡ್ಯದ ಲಕ್ಷ್ಮಣಯ್ಯ ಹಾಗೂ ರಾಜು ಮಳವಳ್ಳಿ ಅವರಿಗೆ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.