ನೂತನವಾಗಿ ಆಯ್ಕೆಯಾದ ನಗರಸಭೆ ಅಧ್ಯಕ್ಷ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಕೆಲವು ಸದಸ್ಯರು ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಗೊಂದಲ ಸೃಷ್ಟಿಸಿದರು ಎಂದು ನಗರಸಭೆ ಸದಸ್ಯ ನಾಗೇಶ್ ತಿಳಿಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ , ಸರ್ಕಾರದಿಂದ ಅನುದಾನ ಬರಬೇಕಾಗಿರುವುದರಿಂದ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಅವರು ಇದ್ದಿದ್ದರೆ ಸಹಕಾರ ಸಿಕ್ಕುತ್ತಿತ್ತು ಎಂಬ ವಿಚಾರಕ್ಕೆ ನಮ್ಮೆಲರಿಗೂ ಸಹಮತವಿದೇ ಎಂದರು. ಆದರೆ ನೆನ್ನೆ ನಡೆದ ಸಭೆಯಲ್ಲಿ ಮೂಲಭೂತ ಸಮಸ್ಯೆಗಳನ್ನೂ ಚರ್ಚಿಸಲು ಮತ್ತು ಕೋರಂ ತಗೆದು ಕೊಳ್ಳಲು ಅವಕಾಶವನ್ನು ನೀಡದೆ ಗದ್ದಲ ಮಾಡಿದರು. ಹಿಂದೆ ಇದ್ದ ಅಧ್ಯಕ್ಷರಿಗೆ 35 ಸದಸ್ಯರು ಉತ್ತಮ ಕೆಲಸಗನ್ನು ಮಾಡಲು ಸಹಾರ ನೀಡುತ್ತಿದ್ದೆವು ಅದೇ ರೀತಿ ಮುಂದಿನ ದಿನಗಳಲ್ಲಿ ನಾಗೇಶ್ ಅವರಿಗೂ ಶಾಸಕರು ಹಾಗೂ ಸರ್ವ ಸದಸ್ಯರು ಸಹಕಾರ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.