ಕೀಬೋರ್ಡ್ ವಾದಕ ಉಮಾಶಂಕರ್ ಅವರಿಗೆ ಅಭಿನಂದನಾ ಸಮಾರಂಭ

ಕರ್ನಾಟಕ ಜಾನಪದ ಪರಿಷತ್ತು, ಉಮಾಶಂಕರ್-50 ಅಭಿನಂದನಾ ಸಮಿತಿಯ ವತಿಯಿಂದ ನವೆಂಬರ್ 02ರ ಬೆಳಿಗ್ಗೆ 10.30ಕ್ಕೆ ಅಭಿನಂದನಾ ಸಮಾರಂಭವನ್ನು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎ.ಸ್.ಸಿ.ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಃ ಕೀಬೋಡ್ ವಾದಿಸುವುದನ್ನು ಅಭ್ಯಾಸ ಮಾಡಿಕೊಂಡ ಕೀಬೋರ್ಡ್ ವಾದಕ ಉಮಾಶಂಕರ್ ಅವರನ್ನು ಅಭಿನಂದಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಎಸ್.ಸಿ.ಬಸವರಾಜು ಸಂಪಹಳ್ಳಿ ವಹಿಸುವರು ಎಂದರು.

ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಜಾನಪದ ಕಲಾವಿದ ಕೀಬೋರ್ಡ್ ವಾದಕ ಉಮಾಶಂಕರ್ ದಂಪತಿಗಳನ್ನು ಅಭಿನಂದಿಸುವರು. ಪತ್ರಕರ್ತ ಚಂದ್ರ ಶೇಖರ್ ದ.ಕೋ.ಹಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಎಂ.ಶ್ರೀನಿವಾಸ್ ಪ್ರತಿಷ್ಠಾಣದ ಅಧ್ಯಕ್ಷ ಡಿ.ಶಿವರಾಜು, ಕ.ಜಾ.ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಿಗೌಡ ಭಾಗವಹಿಸುವರು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್, ತಬಲವಾದಕ ಜಿ.ವೆಂಕಟೇಶ್, ಕಾನಪದ ಕಾಲವಿದೆ ನಂಜಮ್ಮ, ಬೇವಿನಹಳ್ಳಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಪರಿಷತ್ತಿನ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವ್, ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಶೇಖರ್, ಸಮಿತಿಯ ಉಪಾಧ್ಯಕ್ಷ ಶಿವಣ್ಣ ಇದ್ದರು.